Tuesday, June 2, 2009

ಶಾವಿಗೆ ಪಾಯಸ

ಬೇಕಾಗುವ ಸಾಮಾನುಗಳು:

1 ಕಪ್ ಶಾವಿಗೆ, 
2 ಕಪ್ ಹಾಲು, 
1 ಕಪ್ ಸಕ್ಕರೆ, 
ದ್ರಾಕ್ಷಿ, 
ಗೋಡಂಬಿ.
6 ರಿಂದ 8 ಏಲಕ್ಕಿ ಕಾಯಿ,
5 ಕೇಸರಿ,
4 ಟೇಬಲ್ ಸ್ಪೂನ್ ತುಪ್ಪ.  

ಮಾಡುವ ವಿದಾನ:  

1.ಗೋಡಂಬಿ ಮತ್ತು ದ್ರಾಕ್ಷಿ ಯನ್ನು 2 ಟೇಬಲ್ ಸ್ಪೂನ್ ತುಪ್ಪ ದಲ್ಲಿ ಹುರಿದುಕೊಳ್ಳುವುದು.ಹಾಗೆಯೆ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಕಾಯಿಸಿ ಕೊಳ್ಳುವುದು.  

2.ಒಲೆಯ ಮೇಲೆ ಇನ್ನೊಂದು ಪಾತ್ರೆ ಯನ್ನು ಇಟ್ಟು,ತುಪ್ಪ ಹಾಕಿ,ಸಹ್ವಿಗೆ ಯನ್ನು ಹುರಿಯುವುದು.ಅದಕ್ಕೆ ನೀರು ಮತ್ತು ಸಕ್ಕರೆ ಯನ್ನು ಹಾಕಿ ಮುಚ್ಚಿಡುವುದು.1೦ ನಿಮಿಷಗಳಲ್ಲಿ ಶಾವಿಗೆ ಯು ಬೆಂದು ಸಕ್ಕರೆ ಕರಗುತ್ತದೆ.ನಂತರ ಹಾಲಿನಲ್ಲಿ ನೆನೆಸಿದ ಕೇಸರಿ,ಹುರಿದ ದ್ರಾಕ್ಷಿ,ಗೋಡಂಬಿ,ಏಲಕ್ಕಿ ಪುಡಿ ಹಾಕುವುದು.5 ನಿಮಿಷ ಗಳ ನಂತರ ಪಾತ್ರೆ ಯನ್ನು ಒಲೆಯ ಮೇಲಿಂದ ಕೆಳಗಿಳಿಸುವುದು. 

3.1೦ ರಿಂದ 15 ನಿಮಿಷ ಗಳ ನಂತರ ಕಾಯಿಸಿದ ಹಾಲನ್ನು ಬೆರೆಸಿದರೆ ಬಿಸಿ ಬಿಸಿ ಶಾವಿಗೆ ಪಾಯಸ ಸಿದ್ದ.

1 comment: