Thursday, June 18, 2009

ಚಿಕನ್ ಮಸಾಲ


ಬೇಕಾಗುವ ಸಾಮಾನುಗಳು:
2 ಕಪ್ ಚಿಕನ್,
1 ಕಪ್ ಈರುಳ್ಳಿ,
1 ಕಪ್ ಟೊಮ್ಯಾಟೊ,
2 ಟೇಬಲ್ ಸ್ಪೂನ್ ಜೀರಿಗೆ,
2 ಟೇಬಲ್ ಸ್ಪೂನ್ ಎಣ್ಣೆ,
1/4 ಟೇಬಲ್ ಸ್ಪೂನ್ ಅರಿಸಿನ,
2 ಟೇಬಲ್ ಸ್ಪೂನ್ ಗರಂ ಮಸಾಲ,
ಉಪ್ಪು ರುಚಿಗೆ,
1/2 ಕಪ್ ಮೊಸರು.
ಕೊತಂಬರಿ ಸೊಪ್ಪು,

ಮಾಡುವ ವಿದಾನ:

1.ಒಂದು ಕಡಾಯಿ ಗೆ ಎಣ್ಣೆ ಯನ್ನು ಹಾಕಿ ಒಲೆಯ ಮೇಲೆ ಇಡಬೇಕು,ಎಣ್ಣೆ ಬಿಸಿ ಆದಮೇಲೆ,ಜೀರಿಗೆ ಮತ್ತು ಈರುಳ್ಳಿ ಯನ್ನು ಹಾಕಬೇಕು.ಚೆನ್ನಾಗಿ ಫ್ರೈ ಮಾಡಿದ ನಂತರ ಟೊಮ್ಯಾಟೊ,ಅರಿಸಿನ,ಗರಂ ಮಸಾಲ ಹಾಕಬೇಕು.

2.ನಂತರ ಚೆನ್ನಾಗಿ ತೊಳೆದ,ಚಿಕ್ಕದಾಗಿ ಕತ್ತರಿಸಿದ ಚಿಕನ್ ಅನ್ನು ಹಾಕಬೇಕು,ಚೆನ್ನಾಗಿ ಫ್ರೈ ಮಾಡಬೇಕು.ಈಗ ಮೊಸರನ್ನು ಚೆನ್ನಾಗಿ ಕಡೆದು ಹಾಕಬೇಕು,ನಂತರ ರುಚಿಗೆ ತಕ್ಕಸ್ಟು ಉಪ್ಪು ಹಾಕಿ 10 ರಿಂದ 12 ನಿಮಿಷ ಒಲೆಯ ಮೇಲೆ ಇಟ್ಟರೆ ಬಿಸಿ ಬಿಸಿ ಚಿಕನ್ ಮಸಾಲ ಸಿದ್ದವಾಗುತದೆ.

1 comment:

  1. ಯಶಶ್ವಿನಿಯವರೆ, ದಯವಿಟ್ಟು ಮೀನಿನ ಫ್ರೈ ಅಥವಾ ಕಬಾಬ್ ಮಾಡುವುದನ್ನು ತಿಳಿಸಿ. ಗೋಬಿ ಮಂಚೂರಿ ಮತ್ತು ಚಿಕನ್ ಮಸಾಲ ತುಂಬ ರುಚಿಯಾಗಿ ಬಂತು. ಹಾಗೆಯೇ ಸರಳವಾದ ಪೌಷ್ಟಿಕ ಆಹಾರ ತಯಾರಿಸುವುದರ ಬಗ್ಗೆಯೂ ಮಾಹಿತಿ ಇದ್ದರೆ ಒದಗಿಸಿ.

    ReplyDelete