Wednesday, June 10, 2009

ಕ್ಯಾರೆಟ್ ಹಲ್ವ


ಬೇಕಾಗುವ ಸಾಮಾನುಗಳು:

2 ಕಪ್ ಕ್ಯಾರೆಟ್ ತುರಿ, 
1/2 ಕಪ್ ತುಪ್ಪ,
1 ಕಪ್ ಸಕ್ಕರೆ,
1/2 ಕಪ್ ಗೋಡಂಬಿ,
ಬಾದಾಮಿ  

ಮಾಡುವ ವಿದಾನ:

1. ಕ್ಯಾರೆಟ್ ಅನ್ನು ತುರಿದು, 30 ರಿಂದ 40 ಸೆಕೆಂಡ್ ಕಾಲ ಮೈಕ್ರೋವೇವ್ ನಲ್ಲಿ (microwave) ಇಡಬೇಕು.  

2.ನಂತರ ಕ್ಯಾರೆಟ್ ಮತ್ತು 1/4 ಕಪ್ ಗೋಡಂಬಿ, 1/2 ಕಪ್ ಸಕ್ಕರೆ ಯನ್ನು ಮಿಕ್ಷ್ಯ ಗೆ ಹಾಕಬೇಕು(20 ಸೆಕೆಂಡ್ ಅಷ್ಟು ಮಾತ್ರ) 

3. ನಂತರ ಒಂದು ಪಾತ್ರೆ ಗೆ 1/4 ಕಪ್ ತುಪ್ಪ ಹಾಕಿ,ಅದಕ್ಕೆ ಮೇಲೆ ಮಾಡಿದ ಕ್ಯಾರೆಟ್ ಮಿಶ್ರಣ ವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡುತ್ತ ಇರಬೇಕು, ಇದಕ್ಕೆ ಉಳಿದ ಸಕ್ಕರೆ ಯನ್ನು ನಿದಾನ ವಾಗಿ ಹಾಕುತಿರ ಬೇಕು.ನಂತರ ಉಳಿದ ಗೋಡಂಬಿ ಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ರುಚಿ ರುಚಿ ಯಾದ ಕ್ಯಾರೆಟ್ ಹಲ್ವ ಸಿದ್ದ ವಾಗುತ್ತದೆ.  

ಕ್ಯಾರೆಟ್ ಹಲ್ವದ ಮೇಲೆ ಬಾದಾಮಿ ಯನ್ನು ಹಾಕಿ ಅಲಂಕಾರ ಮಾಡಬಹುದು.  

ಸೂಚನೆ: ವಸ್ತುಗಳನ್ನು ರುಚಿ ಗೆ ತಕ್ಕಂತೆ ಹಾಕಬೇಕು.

1 comment:

  1. waaaaaa !!! channagirutte Yahu akka...Karnatakakkuuu allindane maadi kalsibidi

    ReplyDelete