Friday, June 5, 2009

ರವೆ ಉಪ್ಪಿಟ್ಟು


ಬೇಕಾಗುವ ಸಾಮಾನುಗಳು: 

2 ಕಪ್ ಉಪ್ಪಿಟ್ಟು ರವೆ, 
4 ಟೇಬಲ್ ಸ್ಪೂನ್ ತುಪ್ಪ, 
5 ರಿಂದ 8 ಹಸಿ ಮೆಣಸಿನ ಕಾಯಿ, 
ಕರಿಬೇವು, 
1/4 ಕಪ್ ತೆಂಗಿನ ಕಾಯಿ ತುರಿ, 
ಹಸಿ ಶುಂಠಿ, 
1 ಟೇಬಲ್ ಸ್ಪೂನ್ ಉದ್ದಿನ ಬೇಳೆ, 
2 ಒಣ ಮೆಣಸಿನ ಕಾಯಿ, 
ಸಾಸಿವೆ , 
2 ಟೇಬಲ್ ಸ್ಪೂನ್ ನಿಂಬೆ ರಸ, 
ಉಪ್ಪು ರುಚಿಗೆ.

ಮಾಡುವ ವಿದಾನ: 

1. ಒಲೆಯ ಮೇಲೆ ಬಾಣಲೆಯನ್ನು ಇಟ್ಟು,ತುಪ್ಪ ಹಾಕಿ ರವೆ ಯನ್ನು ಹುರಿದುಕೊಳ್ಳುವುದು.  

2.ನಂತರ ಇನ್ನೊಂದು ಪಾತ್ರೆಯನ್ನು ಇಟ್ಟು,ತುಪ್ಪ ಹಾಕಿ,ಸಾಸಿವೆ,ಕರಿಬೇವು,ಒಣ ಮೆಣಸಿನ ಕಾಯಿ ಹಾಕುವುದು.ನಂತರ ಹಸಿ ಮೆಣಸಿನ ಕಾಯಿ, ಉದ್ದಿನ ಬೇಳೆ,ಹಸಿ ಶುಂಠಿ, 4 ಕಪ್ ನೀರು ಹಾಕಿ ಮುಚ್ಚಿಡುವುದು.ನೀರು ಚೆನ್ನಾಗಿ ಕುದಿದಮೇಲೆ ರವೆ,ತೆಂಗಿನ ಕಾಯಿ ತುರಿ ಹಾಕಿ ಮುಚ್ಚಿಡುವುದು.  

3.ರವೆ ಬೆಂದ ಮೇಲೆ ಒಲೆಯ ಮೇಲಿಂದ ಕೆಳಗೆ ಇಳಿಸಿ ನಿಂಬೆ ರಸ ಹಾಕಿದರೆ,ಬಿಸಿ ಬಿಸಿ ರವೆ ಉಪ್ಪಿಟ್ಟು ಸಿದ್ದವಾಗುತ್ತದೆ.

No comments:

Post a Comment