Thursday, June 18, 2009

ಅಣಬೆ ಮಸಾಲ(Mushroom Masala)



ಬೇಕಾಗುವ ಸಾಮಾನುಗಳು:

2 ಕಪ್ ಅಣಬೆ(Mushroom),
1 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ,
1 ಕಪ್ ಟೊಮ್ಯಾಟೊ,
2 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಮತ್ತು ಹಸಿ ಶುಂಠಿ,
2 ಟೇಬಲ್ ಸ್ಪೂನ್ ಎಣ್ಣೆ,
2 ಟೇಬಲ್ ಸ್ಪೂನ್ ಚಿಕನ್ ಮಸಾಲ,
ಉಪ್ಪು ರುಚಿಗೆ ತಕ್ಕಸ್ಟು,
1/2 ಟೇಬಲ್ ಸ್ಪೂನ್ ಹರಿಸಿನ,

ಮಾಡುವ ವಿದಾನ:

1.ಒಲೆಯ ಮೇಲೆ ಒಂದು ಪಾತ್ರೆ ಯನ್ನು ಇಟ್ಟು,ಅದಕ್ಕೆ ಎಣ್ಣೆ ಹಾಕಬೇಕು,ಎಣ್ಣೆ ಬಿಸಿ ಆದಮೇಲೆ,ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಮತ್ತು ಹಸಿ ಶುಂಠಿ ಯನ್ನು ಹಾಕಬೇಕು.ಚೆನ್ನಾಗಿ ಫ್ರೈ ಮಾಡಬೇಕು.

2.ನಂತರ ಇದಕ್ಕೆ ಟೊಮ್ಯಾಟೊ,ಕತ್ತರಿಸಿದ ಅಣಬೆ(Mushroom),ಹರಿಸಿನ ವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

3.ನಂತರ ಇದಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಚಿಕನ್ ಮಸಾಲ ಹಾಕಿ,12 ರಿಂದ 15 ನಿಮಿಷ ಗಳ ಬೇಯಿಸಿದರೆ ಅಣಬೆ ಮಸಾಲ(Mushroom Masala) ಸಿದ್ದವಾಗುತದೆ.

2 comments:

  1. thank you i prepared mushroom masala as per your direction its supeeeeeeeer.

    ReplyDelete
  2. Good, I prepared it today as explained.

    ReplyDelete