Wednesday, June 3, 2009

ರವೆ ದೋಸೆ


ಬೇಕಾಗುವ ಸಾಮಾನುಗಳು: 

2 ಕಪ್ ಸಣ್ಣ ರವೆ, 
1/2 ಕಪ್ ತೆಂಗಿನ ಕಾಯಿ ತುರಿ, 
2 ಈರುಳ್ಳಿ, 
5 ರಿಂದ 6 ಹಸಿ ಮೆಣಸಿನ ಕಾಯಿ, 
ಕೊತಂಬರಿ ಸೊಪ್ಪು, 
ತುಪ್ಪ, 
ಉಪ್ಪು ರುಚಿಗೆ, 
ಅಡಿಗೆ ಸೋಡಾ.  

ಮಾಡುವ ವಿದಾನ:  

1.ರವೆ,ತೆಂಗಿನ ಕಾಯಿ ತುರಿ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳುವುದು.  

2. ಮೇಲೆ ಮಾಡಿದ ಮಿಶ್ರಣ ಕ್ಕೆ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತಂದುಕೊಳ್ಳುವುದು.ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ,ಹಸಿ ಮೆಣಸಿನ ಕಾಯಿ,ಕೊತಂಬರಿ ಸೊಪ್ಪು,ಅಡಿಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.ಇದನ್ನು 1 ಗಂಟೆಗಳ ಕಾಲ ಹಾಗೆ ಇಡುವುದು. 

3.ಈಗ ದೋಸೆ ಹಾಕುವ ಕಾವಲಿ ಮೇಲೆ ತುಪ್ಪ ಹಾಕಿ ದೋಸೆ ಹಾಕುವುದು.ಈಗ ಬಿಸಿ ಬಿಸಿ ರವೆ ದೋಸೆ ಸಿದ್ದ.

No comments:

Post a Comment