Wednesday, June 17, 2009

ಆಲೂ ಪಾಲಕ್


ಬೇಕಾಗುವ ಸಾಮಾನುಗಳು:

2 ಆಲೂಗೆಡ್ಡೆ,

2 ಕಪ್ ಪಾಲಕ್(ಚಿಕ್ಕದಾಗಿ ಕತ್ತರಿಸಿದ),

2 ಈರುಳ್ಳಿ,

1 ಟೊಮ್ಯಾಟೊ,

1/4 ಟೇಬಲ್ ಸ್ಪೂನ್ ಉಪ್ಪು,

1/4 ಟೇಬಲ್ ಸ್ಪೂನ್ ಹರಿಸಿನ,

1/2 ಟೇಬಲ್ ಸ್ಪೂನ್ ಹಚ್ಚ ಕಾರದಪುಡಿ,

1 ಟೇಬಲ್ ಸ್ಪೂನ್ ಜೀರಿಗೆ,

4 ಕೆಂಪು ಮೆಣಸಿನಕಾಯಿ,

1 ಬೆಳ್ಳುಳ್ಳಿ,

2 ಟೇಬಲ್ ಸ್ಪೂನ್ ತುಪ್ಪ,

2 ಟೇಬಲ್ ಸ್ಪೂನ್ ಎಣ್ಣೆ,

ಮಾಡುವ ವಿದಾನ:


1. ಒಂದು ಪಾತ್ರೆ ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು,ಎಣ್ಣೆ ಬಿಸಿ ಆದಮೇಲೆ,ಕೆಂಪು ಮೆಣಸಿನಕಾಯಿ ಮತ್ತು 1/2 ಬೆಳ್ಳುಳ್ಳಿ ಯನ್ನು ಜಜ್ಜಿ(Paste) ಎಣ್ಣೆ ಗೆಹಾಕಬೇಕು,ನಂತರ ಸಣ್ಣದಾಗಿ ಹೆಚ್ಚಿದ 1 ಈರುಳ್ಳಿ ಮತ್ತು 2 ಆಲೂಗಡ್ಡೆ (ಚಿಕ್ಕದಾಗಿ ಕತ್ತರಿಸಿದ) ಯನ್ನು ಹಾಕಬೇಕು,3 ರಿಂದ 5 ನಿಮಿಷ ಆದ ನಂತರ ಹರಿಸಿನ,ಕಾರದ ಪುಡಿ ಯನ್ನು ಹಾಕಬೇಕು,ಚೆನ್ನಾಗಿ ಮಿಶ್ರ ಮಾಡಬೇಕು ,ನಂತರ ಎಡಕ್ಕೆ ಪಾಲಕ್ ಮತ್ತು ಟೊಮ್ಯಾಟೊ ಹಾಕಬೇಕು,ಇದನ್ನು 12 ರಿಂದ 15 ನಿಮಿಷ ಗಳ ಕಾಲ ಒಲೆಯ ಮೇಲೆ ಇಡಬೇಕು.

2. ಇನ್ನೊಂದು ಪಾತ್ರೆ ಯನ್ನು ಒಲೆಯ ಮೇಲೆ ಇಟ್ಟು,ಇದಕ್ಕೆ ತುಪ್ಪ ವನ್ನು ಹಾಕಬೇಕು,ತುಪ್ಪ ಕರಗಿದ ಮೇಲೆ ಸಣ್ಣದಾಗಿ ಹೆಚ್ಚಿದ 1 ಈರುಳ್ಳಿ ಮತ್ತು ಜೀರಿಗೆ,ಉಳಿದ ಬೆಳ್ಳುಳ್ಳಿ ಯನ್ನು ಹಾಕಿ,5 ನಿಮಿಷ ಹಾಗೆ ಬಿಡಬೇಕು,ನಂತರ ಇದನ್ನು ಮೇಲೆ ಮಾಡಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿದರೆ ಆಲೂ ಪಾಲಕ್ ಸಿದ್ದವಾಗುತದೆ

No comments:

Post a Comment