Tuesday, June 2, 2009

ಜಾಮೂನು

ಬೇಕಾಗುವ ಸಾಮಾನು:


ಹಾಲು 2 ಲೀಟರ್ ,

ಸಕ್ಕರೆ 1 ಕೆ. ಜಿ

ತುಪ್ಪ 1/2 ಕೆ.ಜಿ

ಏಲಕ್ಕಿ 10,

 ದ್ರಾಕ್ಷಿ 2೦೦ ಗ್ರಾಂ,

ಮೈದಾ ಹಿಟ್ಟು 1/2 ಕೆ.ಜಿ ,

 ಕೇಸರಿ 15,

1/4 ಟೇಬಲ್ ಸ್ಪೂನ್ ಎಸೆನ್ಚೆ

ಮಾಡುವ ವಿದಾನ:

1.ಹಾಲನ್ನು ಸ್ಟೀಲ್ ಪಾತ್ರೆ ಯಲ್ಲಿ ಹಾಕಿ ಚೆನ್ನಾಗಿ ಕೆದಕುತೀರಬೇಕು.ಹಾಲು ಮೊಸರಿನ ಹಾಗೆ ಗಟ್ಟಿಯಾದ ಮೇಲೆ 2 ಟೇಬಲ್ ಸ್ಪೂನ್ ಮೈದಾ ಹಿಟ್ಟನ್ನು ಹಾಕಬೇಕು,(ಹಾಲಿಗೆ ಹಾಕುವ ಮೈದಾ ಹಿಟ್ಟನ್ನು ಸ್ವಲ್ಪ ಒಲೆಯ ಮೇಲೆ ಹುರಿಯಬೇಕು). 

2.ಈಗ ಮೇಲೆ ಮಾಡಿದ ಹಾಲನ್ನು ಒಲೆಯ ಮೇಲಿಂದ ಕೆಳಗೆ ಇಳಿಸಿ,ಅದಕ್ಕೆ ಮೈದಾ ಹಿಟ್ಟು,ಕೇಸರಿ ಪುಡಿ,ಏಲಕ್ಕಿ ಪುಡಿ ಯನ್ನು ಹಾಕಿ ಚೆನ್ನಾಗಿ ಕಲೆಸಬೇಕು.ಚೆನ್ನಾಗಿ ಕಲೆಸಿದ ಮೇಲೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ನಾದಬೇಕು.ಹದವಾಗಿ ನಾದಿದ ಹಿಟ್ಟನ್ನು ಚಿಕ್ಕ ಉಂಡೆಗಳಾಗಿ ಮಾಡಿ ಕೊಳ್ಳಬೇಕು

3.ಈಗ ಇನ್ನೊಂದು ಪಾತ್ರೆ ಯಲ್ಲಿ ನೀರು ಹಾಗು ಸಕ್ಕರೆ ಯನ್ನು ಒಲೆಯ ಮೇಲೆ ಇಟ್ಟು ಪಾಕ ಮಾಡಿಕೊಳ್ಳಬೇಕು

4.ಈಗ ಒಲೆಯ ಮೇಲೆ ಬಾಣಲೆ ಯನ್ನು ಇಟ್ಟಿ,ತುಪ್ಪ ಹಾಕಬೇಕು.ತುಪ್ಪ ಕಾದ ಮೇಲೆ ಮಾಡಿಟ್ಟುಕೊಂಡಿರುವ ಉಂಡೆ ಗಳ್ಳನ್ನು ಕಾದ ತುಪ್ಪ ದಲ್ಲಿ ಕರಿಯಬೇಕು,ನಂತರ ಅದನ್ನು ಸಕ್ಕರೆ ಪಾಕದಲ್ಲಿ ನೆನೆ ಹಾಕಬೇಕು,ನಂತರ ಸಕ್ರೆ ಪಾಕ ಕೆ ಗುಲಾಬಿ ಎಸೆನ್ಚೆ ಹಾಕುವುದು.2 ರಿಂದ  ಗಂಟೆ ಗಳ ಕಾಲ ನೆನೆದರೆ ಜಾಮೂನು ತಿನ್ನಲು ಮೃದುವಾಗಿರುತ್ತದೆ.

No comments:

Post a Comment