Wednesday, June 10, 2009

ಮಸಾಲ ರೊಟ್ಟಿ


ಬೇಕಾಗುವ ಸಾಮಾನುಗಳು: 

1/4 ಕಪ್ ಅನ್ನ, 
1 ಕಪ್ ಅಕ್ಕಿ ಹಿಟ್ಟು,
1 ಈರುಳ್ಳಿ, 
ಕೊತಂಬರಿ ಸೊಪ್ಪು,
ಉಪ್ಪು ರುಚಿಗೆ, 
ಬೆಳ್ಳುಳ್ಳಿ ಮತ್ತು ಶುಂಠಿ, 
ಸಬ್ಸಿಗೆ ಸೊಪ್ಪು, 
ಪಾಲಕ್ ಸೊಪ್ಪು,
ತುರಿದ ಕ್ಯಾರೆಟ್,
1/2 ಟೇಬಲ್ ಸ್ಪೂನ್ ಜೀರಿಗೆ

ಮಾಡುವ ವಿದಾನ: 

1. ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು,ನಂತರ ಇದಕ್ಕೆ ನೀರು ಹಾಕಿ ಚೆನ್ನಾಗಿ ಕಲೆಸಬೇಕು. (ದೋಸೆ ಹಿಟ್ಟಿನ ತರ ನೀರು ಹಾಕಬಾರದು.ರೊಟ್ಟಿ ತಟ್ಟುವ ಹಾಗೆ ಕಲೆಸಿಕೊಳ್ಳ ಬೇಕು).  

2.ಮೇಲೆ ಮಾಡಿದ ಹಿಟ್ಟನ್ನು ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಬೇಕು.ರೊಟ್ಟಿ ತಟ್ಟುವ ಮಣೆ ಮೇಲೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕೊಂಡು,ಅದರ ಮೇಲೆ ರೊಟ್ಟಿ ಹಿಟ್ಟಿನ ಉಂಡೆ ಯನ್ನು ಇಟ್ಟು ತಟ್ಟಬೇಕು.  

3. ಒಲೆಯ ಮೇಲೆ ರೊಟ್ಟಿ ಮಾಡುವ ತವವನ್ನು ಇಟ್ಟು,ತಟ್ಟಿದ ರೊಟ್ಟಿ ಯನ್ನು ಹಾಕಬೇಕು,30 ರಿಂದ 40 ಸೆಕೆಂಡ್ ಆದ ನಂತರ ರೊಟ್ಟಿಯಾ ಮೇಲೆ ನೀರನ್ನು ಸವರಬೇಕು.ನಂತರ ಎರಡು ಕಡೆ ರೊಟ್ಟಿ ಯನ್ನು ಬೇಯಿಸಿದರೆ ಬಿಸಿ ಬಿಸಿ ಮಸಾಲ ರೊಟ್ಟಿ ಸಿದ್ದ.

No comments:

Post a Comment