Friday, May 29, 2009

ಶಾವಿಗೆ ಉಪ್ಪಿಟ್ಟು


ಬೇಕಾಗುವ ಸಾಮಾನು ಗಳು:  

ಅಕ್ಕಿ ಶಾವಿಗೆ, 
1/2 ಟೇಬಲ್ ಸ್ಪೂನ್ ಸಾಸಿವೆ,
3 ರಿಂದ 5 ಹಸಿ ಮೆಣಸಿನಕಾಯಿ,
2 ಸಣ್ಣಗೆ ಹೆಚ್ಹಿದ ಈರುಳ್ಳಿ, 
ಗೋಡಂಬಿ, 
1ಟೇಬಲ್ ಸ್ಪೂನ್ ಎಣ್ಣೆ,
ಉಪ್ಪು ರುಚಿಗೆ,
ಕಡಲೆ ಬೀಜ, 
2 ಟೇಬಲ್ ಸ್ಪೂನ್ ಉದ್ದಿನ ಬೇಳೆ , 
2 ಟೇಬಲ್ ಸ್ಪೂನ್ ಕಡ್ಲೆ ಬೇಳೆ,
1/2 ಕಪ್ ತುರಿದ ತೆಂಗಿನ ಕಾಯಿ,
ಕರಿಬೇವು,
ಅರಿಸಿನ,
3 ಟೇಬಲ್ ಸ್ಪೂನ್ ನಿಂಬೆ ರಸ, 
ಕೊತಂಬರಿ ಸೊಪ್ಪು, 

ಮಾಡುವ ವಿದಾನ: 

1.ಮೊದಲು ಪಾತ್ರೆ ಗೆ ಎಣ್ಣೆ ಯನ್ನು ಹಾಕಬೇಕು,ನಂತರ ಸಾಸಿವೆ,ಕರಿಬೇವು,ಕಡ್ಲೆ ಬೇಳೆ,ಉದ್ದಿನ ಬೇಳೆ,ಗೋಡಂಬಿ ,ಕಡಲೆ ಬೀಜ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿ ಯನ್ನು ಹಾಕಬೇಕು,ಚೆನ್ನಾಗಿ ಫ್ರೈ ಮಾಡಬೇಕು. 

2.ಈ ಮಿಶ್ರಣಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಅರಿಸಿನ ಹಾಕಿ ಚೆನ್ನಾಗಿ ಕಲೆಸಬೇಕು. 

3. ಇನ್ನೊದು ಪಾತ್ರೆ ಯಲ್ಲಿ 1 ಲೀಟರ್ ರಷ್ಟು ನೀರನ್ನು ಹಾಕಿ ಕುದಿಸಬೇಕು,ನಂತರ ಇದಕ್ಕೆ ಅಕ್ಕಿ ಶಾವಿಗೆ ಯನ್ನು ಹಾಕಿ ಒಲೆಯ ಮೇಲೆ 5 ನಿಮಿಷ ಬಿಡಬೇಕು,ನಂತರ ಒಲೆಯನ್ನು ಆರಿಸಿ ಶಾವಿಗೆ ಯಿಂದ ಬಿಸಿ ನೀರನ್ನು ತಗೆದು,ತಣ್ಣನೆ ನೀರನ್ನು ಹಾಕಿ,೫ ನಿಮಿಷ ಹಾಗೆ ಬಿಡಬೇಕು,ನಂತರ ಶಾವಿಗೆ ಯಿಂದ ಪೂರ್ತಿ ಯಾಗಿ ನೀರನ್ನು ತಗೆಯಬೇಕು. 

4.ಶಾವಿಗೆ ಗೆ ಮೇಲೆ ಮಾಡಿದ ಗೊಜ್ಜು,ನಿಂಬೆ ರಸ,ಕೊತಂಬರಿ ಸೊಪ್ಪು,ತೆಂಗಿನ ಕಾಯಿ ತುರಿ ಯನ್ನು ಹಾಕಿ ಕಲೆಸಬೇಕು.  

ಈಗ ರುಚಿ ರುಚಿ ಯಾದ ಶಾವಿಗೆ ಉಪ್ಪಿಟ್ಟು ಸಿದ್ದ.

ರವೆ ಇಡ್ಲಿ


ಬೇಕಾಗುವ ಸಾಮಾನು ಗಳು:

1 ಕಪ್ ರವೆ(ಇಡ್ಲಿ ರವೆ) ,
1/2 ಟೇಬಲ್ ಸ್ಪೂನ್ ಸಾಸಿವೆ,
2 ರಿಂದ 4 ಹಸಿ ಮೆಣಸಿನಕಾಯಿ, 
1 ಟೇಬಲ್ ಸ್ಪೂನ್ ಕಡ್ಲೆ ಬೇಳೆ, 
1/2 ಟೇಬಲ್ ಸ್ಪೂನ್ ಅಡಿಗೆ ಸೋಡಾ, 
ಗೋಡಂಬಿ, 
1 ಟೇಬಲ್ ಸ್ಪೂನ್ ಎಣ್ಣೆ, 
ಉಪ್ಪು ರುಚಿಗೆ, 
1/2 ಕಪ್ ಮೊಸರು, 
ಕರಿಬೇವು,
ಕ್ಯಾರೆಟ್.  

ಮಾಡುವ ವಿದಾನ:  

1. ಮೊದಲು ಪಾತ್ರೆ ಗೆ ಎಣ್ಣೆ ಯನ್ನು ಹಾಕಬೇಕು,ನಂತರ ಸಾಸಿವೆ,ಕರಿಬೇವು,ಕಡ್ಲೆ ಬೇಳೆ,ಗೋಡಂಬಿ,ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಯನ್ನು ಹಾಕಬೇಕು,2 ರಿಂದ 4 ನಿಮಿಷ ಆದ ಮೇಲೆ ಪಾತ್ರೆ ಯನ್ನು ಒಲೆಯ ಮೇಲಿಂದ ತೆಗೆದು,ರವೆ ಯನ್ನು ಹಾಕಿ,ಚೆನ್ನಾಗಿ ಮಿಶ್ರ ಮಾಡಬೇಕು. 

2.ಈ ಮಿಶ್ರಣಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಅಡಿಗೆ ಸೋಡಾ,ಮೊಸರು ಹಾಕಿ ಚೆನ್ನಾಗಿ ಕಲೆಸಬೇಕು.ಇದನ್ನು 15 ರಿಂದ 20 ನಿಮಿಷ ಹಾಗೆ ಇಡಬೇಕು.

3.ಇಡ್ಲಿ ಮಾಡುವ ತಟ್ಟೆ ಗೆ ಎಣ್ಣೆ ಯನ್ನು ಹಾಕಿ,ನಂತರ ಕ್ಯಾರೆಟ್ಅನ್ನು ಚಿಕ್ಕದಾಗಿ(ರೌಂಡ್) ಕತ್ತರಿಸಿ ಇಡ್ಲಿ ಮಾಡುವ ತಟ್ಟೆ ಯಲ್ಲ್ಲಿ ಇಡಬೇಕು,ನಂತರ ಮೇಲೆ ಮಾಡಿದ ಮಿಶ್ರಣವನ್ನು ತಟ್ಟೆ ಗೆ ಹಾಕಬೇಕು,ಇದನ್ನು 15 ರಿಂದ 20 ನಿಮಿಷ ಗಳ ಕಾಲ ಹಬೆ ಯಲ್ಲಿ ಬೇಯಿಸಬೇಕು.

ಈಗ ರುಚಿ ರುಚಿ ಯಾದ ರವೆ ಇಡ್ಲಿ ಸಿದ್ದ.