Monday, June 1, 2009

ಗೋಬಿ ಮಂಚೂರಿ


ಬೇಕಾಗುವ ಸಾಮಾನುಗಳು:

1 ಹೂ ಕೋಸು(Cauli Flower), 
1 ಕಪ್ ಮೈದಾ (All purpose flour), 
4 ಟೇಬಲ್ ಸ್ಪೂನ್ ಜೋಳದ ಹಿಟ್ಟು(Corn Flour), 
ಉಪ್ಪು ರುಚಿಗೆ, 
1 ಟೇಬಲ್ ಸ್ಪೂನ್ ಹಚ್ಹ ಕಾರದ ಪುಡಿ, 
2 ಈರುಳ್ಳಿ,
4 ರಿಂದ 5 ಹಸಿ ಮೆಣಸಿನ ಕಾಯಿ, 
1 ಬೆಳ್ಳುಳ್ಳಿ, ಎಣ್ಣೆ, 
ವಿನೆಗರ್(Vinegar), 
1 ಟೇಬಲ್ ಸ್ಪೂನ್ ಸೋಯ ಸಾಸ್(Soya sauce),
2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್(Chilli Sacce),
3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್(Tomoto Sauce),
ಕೊತಂಬರಿ ಸೊಪ್ಪು, 
 
ಮಾಡುವ ವಿದಾನ: 

1. ಹೂ ಕೋಸನ್ನು ಚೆನ್ನಾಗಿ ತೊಳೆದು,ಚಿಕ್ಕದಾಗಿ ಕತ್ತರಿಸಿ ಕೊಳ್ಳಬೇಕು.ಒಂದು ಪಾತ್ರೆ ಯಲ್ಲಿ 1 ಕಪ್ ಮೈದಾ (all purpose flour),ಉಪ್ಪು,ಹಚ್ಚ ಕಾರದ ಪುಡಿ,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಗೆ ನೀರು ಹಾಕಿ ಕಲೆಸಿ ಕೊಳ್ಳಬೇಕು.ಇದಕ್ಕೆ ಹುಕೊಸನ್ನು ಹಾಕಿ ಎಣ್ಣಿ ಯಲ್ಲಿ ಕರಿದು ಕೊಳ್ಳಬೇಕು.
 
2.ಈಗ ಒಲೆಯ ಮೇಲೆ ದೊಡ್ಡ ಬಾಣಲೆ ಯನ್ನು ಇಟ್ಟು,ಅದಕ್ಕೆ 2 ರಿಂದ 3 ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು,ನಂತರ ಅದಕ್ಕೆ ಚಿಕ್ಕದಾಗಿ ಕತ್ಹರಿಸಿದ ಈರುಳ್ಳಿ,ಹಸಿ ಮೆಣಸಿನ ಕಾಯಿ,ಬೆಳ್ಳುಳ್ಳಿ ಯನ್ನು ಹಾಕಬೇಕು,ನಂತರ ಇದಕ್ಕೆ 1 ಟೇಬಲ್ ಸ್ಪೂನ್ ವಿನೆಗರ್,೧ ಟೇಬಲ್ ಸ್ಪೂನ್ ಸೋಯ ಸಾಸ್,2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್ ,3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.ಈಗ ಇದಕ್ಕೆ ಕರಿದ ಗೋಬಿ ಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
 
ಈಗ ಗೋಬಿ ಮಂಚೂರಿ ಸಿದ್ದ,ಈಗ ಕೊತಂಬರಿ ಸೊಪ್ಪನು ಗೋಬಿ ಮೇಲೆ ಹಾಕಬೇಕು.

2 comments:

  1. idu tumba chennagide nanage tumba ista agitu

    ReplyDelete
  2. Hi, Yashaswini,

    but i didnt understand y 2 tb spoon corn flour requiered in oil? can u explain?

    ReplyDelete