Tuesday, June 2, 2009

ಜಾಮೂನು

ಬೇಕಾಗುವ ಸಾಮಾನು:


ಹಾಲು 2 ಲೀಟರ್ ,

ಸಕ್ಕರೆ 1 ಕೆ. ಜಿ

ತುಪ್ಪ 1/2 ಕೆ.ಜಿ

ಏಲಕ್ಕಿ 10,

 ದ್ರಾಕ್ಷಿ 2೦೦ ಗ್ರಾಂ,

ಮೈದಾ ಹಿಟ್ಟು 1/2 ಕೆ.ಜಿ ,

 ಕೇಸರಿ 15,

1/4 ಟೇಬಲ್ ಸ್ಪೂನ್ ಎಸೆನ್ಚೆ

ಮಾಡುವ ವಿದಾನ:

1.ಹಾಲನ್ನು ಸ್ಟೀಲ್ ಪಾತ್ರೆ ಯಲ್ಲಿ ಹಾಕಿ ಚೆನ್ನಾಗಿ ಕೆದಕುತೀರಬೇಕು.ಹಾಲು ಮೊಸರಿನ ಹಾಗೆ ಗಟ್ಟಿಯಾದ ಮೇಲೆ 2 ಟೇಬಲ್ ಸ್ಪೂನ್ ಮೈದಾ ಹಿಟ್ಟನ್ನು ಹಾಕಬೇಕು,(ಹಾಲಿಗೆ ಹಾಕುವ ಮೈದಾ ಹಿಟ್ಟನ್ನು ಸ್ವಲ್ಪ ಒಲೆಯ ಮೇಲೆ ಹುರಿಯಬೇಕು). 

2.ಈಗ ಮೇಲೆ ಮಾಡಿದ ಹಾಲನ್ನು ಒಲೆಯ ಮೇಲಿಂದ ಕೆಳಗೆ ಇಳಿಸಿ,ಅದಕ್ಕೆ ಮೈದಾ ಹಿಟ್ಟು,ಕೇಸರಿ ಪುಡಿ,ಏಲಕ್ಕಿ ಪುಡಿ ಯನ್ನು ಹಾಕಿ ಚೆನ್ನಾಗಿ ಕಲೆಸಬೇಕು.ಚೆನ್ನಾಗಿ ಕಲೆಸಿದ ಮೇಲೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ನಾದಬೇಕು.ಹದವಾಗಿ ನಾದಿದ ಹಿಟ್ಟನ್ನು ಚಿಕ್ಕ ಉಂಡೆಗಳಾಗಿ ಮಾಡಿ ಕೊಳ್ಳಬೇಕು

3.ಈಗ ಇನ್ನೊಂದು ಪಾತ್ರೆ ಯಲ್ಲಿ ನೀರು ಹಾಗು ಸಕ್ಕರೆ ಯನ್ನು ಒಲೆಯ ಮೇಲೆ ಇಟ್ಟು ಪಾಕ ಮಾಡಿಕೊಳ್ಳಬೇಕು

4.ಈಗ ಒಲೆಯ ಮೇಲೆ ಬಾಣಲೆ ಯನ್ನು ಇಟ್ಟಿ,ತುಪ್ಪ ಹಾಕಬೇಕು.ತುಪ್ಪ ಕಾದ ಮೇಲೆ ಮಾಡಿಟ್ಟುಕೊಂಡಿರುವ ಉಂಡೆ ಗಳ್ಳನ್ನು ಕಾದ ತುಪ್ಪ ದಲ್ಲಿ ಕರಿಯಬೇಕು,ನಂತರ ಅದನ್ನು ಸಕ್ಕರೆ ಪಾಕದಲ್ಲಿ ನೆನೆ ಹಾಕಬೇಕು,ನಂತರ ಸಕ್ರೆ ಪಾಕ ಕೆ ಗುಲಾಬಿ ಎಸೆನ್ಚೆ ಹಾಕುವುದು.2 ರಿಂದ  ಗಂಟೆ ಗಳ ಕಾಲ ನೆನೆದರೆ ಜಾಮೂನು ತಿನ್ನಲು ಮೃದುವಾಗಿರುತ್ತದೆ.

ಮೊಟ್ಟೆ ಮಸಾಲಾ


ಬೇಕಾಗುವ ಸಾಮಾನುಗಳು: 

4 ಮೊಟ್ಟೆ, 
2 ಈರುಳ್ಳಿ, 
1/4 ಟೇಬಲ್ ಸ್ಪೂನ್ ಮೆಣಸಿನ ಪುಡಿ,
ಉಪ್ಪು ರುಚಿಗೆ, 
1 ಟೇಬಲ್ ಸ್ಪೂನ್ ನಿಂಬೆ ರಸ,
ಕೊತಂಬರಿ ಸೊಪ್ಪು, 
1/2 ಟೇಬಲ್ ಸ್ಪೂನ್ ಚಾಟ್ ಮಸಾಲಾ,
ಮಯೋನಿಸ್ ಸಾಸ್, 

ಮಾಡುವ ವಿದಾನ:  

1.ಮೊಟ್ಟೆ ಯನ್ನು ನೀರಿನಲ್ಲಿ ಬೇಯಿಸಿ ಕೊಂಡು,ಮೊಟ್ಟೆ ಯನ್ನು ಎರಡು ಬಾಗ ವಾಗಿ ಕತ್ತರಿಸಿ ಕೊಳ್ಳ ಬೇಕು. 

2.ಈಗ ಒಂದು ಪಾತ್ರೆ ಗೆ ಮೊಟ್ಟೆ ಯಾ ಹಳದಿ ಬಾಗ,ಸಣ್ಣದಾಗಿ ಕತ್ತರಿಸಿದ ಈರುಳ್ಳಿ,ಉಪ್ಪು,ಮೆಣಸಿನ ಪುಡಿ,ಚಾಟ್ ಮಸಾಲ, ನಿಂಬೆ ರಸ,ಕೊತಂಬರಿ ಸೊಪ್ಪು,ಮಯೋನಿಸ್ ಸಾಸ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. 

3. ನಂತರ ಮೇಲೆ ಮಾಡಿದ ಮಿಶ್ರಣ ವನ್ನು ಕತ್ತರಿಸಿದ ಮೊಟ್ಟೆ ಯಾ ಬಿಳಿ ಬಾಗ ದ ಒಳಗೆ ತುಂಬಿಸಬೇಕು.  

ಈಗ ರುಚಿ ರುಚಿಯಾದ ಮೊಟ್ಟೆ ಮಸಾಲಾ ಸಿದ್ದ.

Monday, June 1, 2009

ಗೋಬಿ ಮಂಚೂರಿ


ಬೇಕಾಗುವ ಸಾಮಾನುಗಳು:

1 ಹೂ ಕೋಸು(Cauli Flower), 
1 ಕಪ್ ಮೈದಾ (All purpose flour), 
4 ಟೇಬಲ್ ಸ್ಪೂನ್ ಜೋಳದ ಹಿಟ್ಟು(Corn Flour), 
ಉಪ್ಪು ರುಚಿಗೆ, 
1 ಟೇಬಲ್ ಸ್ಪೂನ್ ಹಚ್ಹ ಕಾರದ ಪುಡಿ, 
2 ಈರುಳ್ಳಿ,
4 ರಿಂದ 5 ಹಸಿ ಮೆಣಸಿನ ಕಾಯಿ, 
1 ಬೆಳ್ಳುಳ್ಳಿ, ಎಣ್ಣೆ, 
ವಿನೆಗರ್(Vinegar), 
1 ಟೇಬಲ್ ಸ್ಪೂನ್ ಸೋಯ ಸಾಸ್(Soya sauce),
2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್(Chilli Sacce),
3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್(Tomoto Sauce),
ಕೊತಂಬರಿ ಸೊಪ್ಪು, 
 
ಮಾಡುವ ವಿದಾನ: 

1. ಹೂ ಕೋಸನ್ನು ಚೆನ್ನಾಗಿ ತೊಳೆದು,ಚಿಕ್ಕದಾಗಿ ಕತ್ತರಿಸಿ ಕೊಳ್ಳಬೇಕು.ಒಂದು ಪಾತ್ರೆ ಯಲ್ಲಿ 1 ಕಪ್ ಮೈದಾ (all purpose flour),ಉಪ್ಪು,ಹಚ್ಚ ಕಾರದ ಪುಡಿ,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಗೆ ನೀರು ಹಾಕಿ ಕಲೆಸಿ ಕೊಳ್ಳಬೇಕು.ಇದಕ್ಕೆ ಹುಕೊಸನ್ನು ಹಾಕಿ ಎಣ್ಣಿ ಯಲ್ಲಿ ಕರಿದು ಕೊಳ್ಳಬೇಕು.
 
2.ಈಗ ಒಲೆಯ ಮೇಲೆ ದೊಡ್ಡ ಬಾಣಲೆ ಯನ್ನು ಇಟ್ಟು,ಅದಕ್ಕೆ 2 ರಿಂದ 3 ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು,ನಂತರ ಅದಕ್ಕೆ ಚಿಕ್ಕದಾಗಿ ಕತ್ಹರಿಸಿದ ಈರುಳ್ಳಿ,ಹಸಿ ಮೆಣಸಿನ ಕಾಯಿ,ಬೆಳ್ಳುಳ್ಳಿ ಯನ್ನು ಹಾಕಬೇಕು,ನಂತರ ಇದಕ್ಕೆ 1 ಟೇಬಲ್ ಸ್ಪೂನ್ ವಿನೆಗರ್,೧ ಟೇಬಲ್ ಸ್ಪೂನ್ ಸೋಯ ಸಾಸ್,2 ಟೇಬಲ್ ಸ್ಪೂನ್ ಚಿಲ್ಲಿ ಸಾಸ್ ,3 ಟೇಬಲ್ ಸ್ಪೂನ್ ಟೊಮ್ಯಾಟೊ ಸಾಸ್,2 ಟೇಬಲ್ ಸ್ಪೂನ್ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.ಈಗ ಇದಕ್ಕೆ ಕರಿದ ಗೋಬಿ ಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
 
ಈಗ ಗೋಬಿ ಮಂಚೂರಿ ಸಿದ್ದ,ಈಗ ಕೊತಂಬರಿ ಸೊಪ್ಪನು ಗೋಬಿ ಮೇಲೆ ಹಾಕಬೇಕು.

Friday, May 29, 2009

ಶಾವಿಗೆ ಉಪ್ಪಿಟ್ಟು


ಬೇಕಾಗುವ ಸಾಮಾನು ಗಳು:  

ಅಕ್ಕಿ ಶಾವಿಗೆ, 
1/2 ಟೇಬಲ್ ಸ್ಪೂನ್ ಸಾಸಿವೆ,
3 ರಿಂದ 5 ಹಸಿ ಮೆಣಸಿನಕಾಯಿ,
2 ಸಣ್ಣಗೆ ಹೆಚ್ಹಿದ ಈರುಳ್ಳಿ, 
ಗೋಡಂಬಿ, 
1ಟೇಬಲ್ ಸ್ಪೂನ್ ಎಣ್ಣೆ,
ಉಪ್ಪು ರುಚಿಗೆ,
ಕಡಲೆ ಬೀಜ, 
2 ಟೇಬಲ್ ಸ್ಪೂನ್ ಉದ್ದಿನ ಬೇಳೆ , 
2 ಟೇಬಲ್ ಸ್ಪೂನ್ ಕಡ್ಲೆ ಬೇಳೆ,
1/2 ಕಪ್ ತುರಿದ ತೆಂಗಿನ ಕಾಯಿ,
ಕರಿಬೇವು,
ಅರಿಸಿನ,
3 ಟೇಬಲ್ ಸ್ಪೂನ್ ನಿಂಬೆ ರಸ, 
ಕೊತಂಬರಿ ಸೊಪ್ಪು, 

ಮಾಡುವ ವಿದಾನ: 

1.ಮೊದಲು ಪಾತ್ರೆ ಗೆ ಎಣ್ಣೆ ಯನ್ನು ಹಾಕಬೇಕು,ನಂತರ ಸಾಸಿವೆ,ಕರಿಬೇವು,ಕಡ್ಲೆ ಬೇಳೆ,ಉದ್ದಿನ ಬೇಳೆ,ಗೋಡಂಬಿ ,ಕಡಲೆ ಬೀಜ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಮತ್ತು ಈರುಳ್ಳಿ ಯನ್ನು ಹಾಕಬೇಕು,ಚೆನ್ನಾಗಿ ಫ್ರೈ ಮಾಡಬೇಕು. 

2.ಈ ಮಿಶ್ರಣಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಅರಿಸಿನ ಹಾಕಿ ಚೆನ್ನಾಗಿ ಕಲೆಸಬೇಕು. 

3. ಇನ್ನೊದು ಪಾತ್ರೆ ಯಲ್ಲಿ 1 ಲೀಟರ್ ರಷ್ಟು ನೀರನ್ನು ಹಾಕಿ ಕುದಿಸಬೇಕು,ನಂತರ ಇದಕ್ಕೆ ಅಕ್ಕಿ ಶಾವಿಗೆ ಯನ್ನು ಹಾಕಿ ಒಲೆಯ ಮೇಲೆ 5 ನಿಮಿಷ ಬಿಡಬೇಕು,ನಂತರ ಒಲೆಯನ್ನು ಆರಿಸಿ ಶಾವಿಗೆ ಯಿಂದ ಬಿಸಿ ನೀರನ್ನು ತಗೆದು,ತಣ್ಣನೆ ನೀರನ್ನು ಹಾಕಿ,೫ ನಿಮಿಷ ಹಾಗೆ ಬಿಡಬೇಕು,ನಂತರ ಶಾವಿಗೆ ಯಿಂದ ಪೂರ್ತಿ ಯಾಗಿ ನೀರನ್ನು ತಗೆಯಬೇಕು. 

4.ಶಾವಿಗೆ ಗೆ ಮೇಲೆ ಮಾಡಿದ ಗೊಜ್ಜು,ನಿಂಬೆ ರಸ,ಕೊತಂಬರಿ ಸೊಪ್ಪು,ತೆಂಗಿನ ಕಾಯಿ ತುರಿ ಯನ್ನು ಹಾಕಿ ಕಲೆಸಬೇಕು.  

ಈಗ ರುಚಿ ರುಚಿ ಯಾದ ಶಾವಿಗೆ ಉಪ್ಪಿಟ್ಟು ಸಿದ್ದ.

ರವೆ ಇಡ್ಲಿ


ಬೇಕಾಗುವ ಸಾಮಾನು ಗಳು:

1 ಕಪ್ ರವೆ(ಇಡ್ಲಿ ರವೆ) ,
1/2 ಟೇಬಲ್ ಸ್ಪೂನ್ ಸಾಸಿವೆ,
2 ರಿಂದ 4 ಹಸಿ ಮೆಣಸಿನಕಾಯಿ, 
1 ಟೇಬಲ್ ಸ್ಪೂನ್ ಕಡ್ಲೆ ಬೇಳೆ, 
1/2 ಟೇಬಲ್ ಸ್ಪೂನ್ ಅಡಿಗೆ ಸೋಡಾ, 
ಗೋಡಂಬಿ, 
1 ಟೇಬಲ್ ಸ್ಪೂನ್ ಎಣ್ಣೆ, 
ಉಪ್ಪು ರುಚಿಗೆ, 
1/2 ಕಪ್ ಮೊಸರು, 
ಕರಿಬೇವು,
ಕ್ಯಾರೆಟ್.  

ಮಾಡುವ ವಿದಾನ:  

1. ಮೊದಲು ಪಾತ್ರೆ ಗೆ ಎಣ್ಣೆ ಯನ್ನು ಹಾಕಬೇಕು,ನಂತರ ಸಾಸಿವೆ,ಕರಿಬೇವು,ಕಡ್ಲೆ ಬೇಳೆ,ಗೋಡಂಬಿ,ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಯನ್ನು ಹಾಕಬೇಕು,2 ರಿಂದ 4 ನಿಮಿಷ ಆದ ಮೇಲೆ ಪಾತ್ರೆ ಯನ್ನು ಒಲೆಯ ಮೇಲಿಂದ ತೆಗೆದು,ರವೆ ಯನ್ನು ಹಾಕಿ,ಚೆನ್ನಾಗಿ ಮಿಶ್ರ ಮಾಡಬೇಕು. 

2.ಈ ಮಿಶ್ರಣಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಅಡಿಗೆ ಸೋಡಾ,ಮೊಸರು ಹಾಕಿ ಚೆನ್ನಾಗಿ ಕಲೆಸಬೇಕು.ಇದನ್ನು 15 ರಿಂದ 20 ನಿಮಿಷ ಹಾಗೆ ಇಡಬೇಕು.

3.ಇಡ್ಲಿ ಮಾಡುವ ತಟ್ಟೆ ಗೆ ಎಣ್ಣೆ ಯನ್ನು ಹಾಕಿ,ನಂತರ ಕ್ಯಾರೆಟ್ಅನ್ನು ಚಿಕ್ಕದಾಗಿ(ರೌಂಡ್) ಕತ್ತರಿಸಿ ಇಡ್ಲಿ ಮಾಡುವ ತಟ್ಟೆ ಯಲ್ಲ್ಲಿ ಇಡಬೇಕು,ನಂತರ ಮೇಲೆ ಮಾಡಿದ ಮಿಶ್ರಣವನ್ನು ತಟ್ಟೆ ಗೆ ಹಾಕಬೇಕು,ಇದನ್ನು 15 ರಿಂದ 20 ನಿಮಿಷ ಗಳ ಕಾಲ ಹಬೆ ಯಲ್ಲಿ ಬೇಯಿಸಬೇಕು.

ಈಗ ರುಚಿ ರುಚಿ ಯಾದ ರವೆ ಇಡ್ಲಿ ಸಿದ್ದ.