Showing posts with label ರವೆ ಇಡ್ಲಿ. Show all posts
Showing posts with label ರವೆ ಇಡ್ಲಿ. Show all posts

Friday, May 29, 2009

ರವೆ ಇಡ್ಲಿ


ಬೇಕಾಗುವ ಸಾಮಾನು ಗಳು:

1 ಕಪ್ ರವೆ(ಇಡ್ಲಿ ರವೆ) ,
1/2 ಟೇಬಲ್ ಸ್ಪೂನ್ ಸಾಸಿವೆ,
2 ರಿಂದ 4 ಹಸಿ ಮೆಣಸಿನಕಾಯಿ, 
1 ಟೇಬಲ್ ಸ್ಪೂನ್ ಕಡ್ಲೆ ಬೇಳೆ, 
1/2 ಟೇಬಲ್ ಸ್ಪೂನ್ ಅಡಿಗೆ ಸೋಡಾ, 
ಗೋಡಂಬಿ, 
1 ಟೇಬಲ್ ಸ್ಪೂನ್ ಎಣ್ಣೆ, 
ಉಪ್ಪು ರುಚಿಗೆ, 
1/2 ಕಪ್ ಮೊಸರು, 
ಕರಿಬೇವು,
ಕ್ಯಾರೆಟ್.  

ಮಾಡುವ ವಿದಾನ:  

1. ಮೊದಲು ಪಾತ್ರೆ ಗೆ ಎಣ್ಣೆ ಯನ್ನು ಹಾಕಬೇಕು,ನಂತರ ಸಾಸಿವೆ,ಕರಿಬೇವು,ಕಡ್ಲೆ ಬೇಳೆ,ಗೋಡಂಬಿ,ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ ಯನ್ನು ಹಾಕಬೇಕು,2 ರಿಂದ 4 ನಿಮಿಷ ಆದ ಮೇಲೆ ಪಾತ್ರೆ ಯನ್ನು ಒಲೆಯ ಮೇಲಿಂದ ತೆಗೆದು,ರವೆ ಯನ್ನು ಹಾಕಿ,ಚೆನ್ನಾಗಿ ಮಿಶ್ರ ಮಾಡಬೇಕು. 

2.ಈ ಮಿಶ್ರಣಕ್ಕೆ ಉಪ್ಪು ರುಚಿಗೆ ತಕ್ಕಸ್ಟು,ಅಡಿಗೆ ಸೋಡಾ,ಮೊಸರು ಹಾಕಿ ಚೆನ್ನಾಗಿ ಕಲೆಸಬೇಕು.ಇದನ್ನು 15 ರಿಂದ 20 ನಿಮಿಷ ಹಾಗೆ ಇಡಬೇಕು.

3.ಇಡ್ಲಿ ಮಾಡುವ ತಟ್ಟೆ ಗೆ ಎಣ್ಣೆ ಯನ್ನು ಹಾಕಿ,ನಂತರ ಕ್ಯಾರೆಟ್ಅನ್ನು ಚಿಕ್ಕದಾಗಿ(ರೌಂಡ್) ಕತ್ತರಿಸಿ ಇಡ್ಲಿ ಮಾಡುವ ತಟ್ಟೆ ಯಲ್ಲ್ಲಿ ಇಡಬೇಕು,ನಂತರ ಮೇಲೆ ಮಾಡಿದ ಮಿಶ್ರಣವನ್ನು ತಟ್ಟೆ ಗೆ ಹಾಕಬೇಕು,ಇದನ್ನು 15 ರಿಂದ 20 ನಿಮಿಷ ಗಳ ಕಾಲ ಹಬೆ ಯಲ್ಲಿ ಬೇಯಿಸಬೇಕು.

ಈಗ ರುಚಿ ರುಚಿ ಯಾದ ರವೆ ಇಡ್ಲಿ ಸಿದ್ದ.